Share your thoughts. Feel free to add GIFs, videos, hashtags and more to your posts and comments. Get started by commenting below.
top of page
Eakantagiri Trust
ಸಂವಿಧಾನ ಜಾಗೃತಿ ಅಭಿಯಾನ, ಲೋಕಿಕೆರೆ
ಏಕಾಂತಗಿರಿ ಟ್ರಸ್ಟ್ ಅಡಿಯಲ್ಲಿ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಅಭಿಯಾನದ ಅಂಗವಾಗಿ ದಿನಾಂಕ 17-02-2024 ರಂದು ಲೋಕಿಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮಕ್ಕಳಿಗೆ ಸಂವಿಧಾನದ ಕುರಿತು ಅರಿವು ಮೂಡಿಸುವ ಮೂಲಕ ಸಂವಿಧಾನ ಪೀಠಿಕೆಯ ವಾಚನ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಏಕಾಂತಗಿರಿ ಟ್ರಸ್ಟಿನ ಕಾರ್ಯದರ್ಶಿ ಡಾ.ಕೆ.ಎ.ಓಬಳೇಶ್, ಹಿರಿಯ ಪತ್ರಕರ್ತರಾದ ಪುರಂದರ್ ಲೋಕಿಕೆರೆ, ಮುಖ್ಯ ಶಿಕ್ಷಕಿ ಗೌರಮ್ಮ, ಗ್ರಂಥಪಾಲಕರಾದ ಮಂಜಪ್ಪ, ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಸಂವಿಧಾನ ಪ್ರಸ್ತಾವನೆಯ ಪ್ರತಿಯನ್ನು ನೀಡಲಾಯಿತು.
ಸಂವಿಧಾನ ಜಾಗೃತಿ ಅಭಿಯಾನ, ಕಲ್ಕೆರೆ ಕ್ಯಾಂಪ್
ಏಕಾಂತಗಿರಿ ಟ್ರಸ್ಟ್ ಅಡಿಯಲ್ಲಿ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಅಭಿಯಾನದ ಅಂಗವಾಗಿ ದಿನಾಂಕ 17-02-2024 ರಂದು ದಾವಣಗೆರೆ ತಾಲ್ಲೂಕಿನ ಕಲ್ಕೆರೆ ಕ್ಯಾಂಪಿನಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಮಕ್ಕಳಿಗೆ ಸಂವಿಧಾನದ ಕುರಿತು ಅರಿವು ಮೂಡಿಸುವ ಮೂಲಕ ಸಂವಿಧಾನ ಪೀಠಿಕೆಯ ವಾಚನ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಏಕಾಂತಗಿರಿ ಟ್ರಸ್ಟಿನ ಕಾರ್ಯದರ್ಶಿ ಡಾ.ಕೆ.ಎ.ಓಬಳೇಶ್, ಮುಖ್ಯ ಶಿಕ್ಷಕರಾದ ರುದ್ರೇಶ್, ಶಿಕ್ಷಕಿ ವಾಣಿ, ಅಂಗನವಾಡಿ ಕಾರ್ಯಕರ್ತೆ ದೀಪಾ, ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಸಂವಿಧಾನ ಪ್ರಸ್ತಾವನೆಯ ಪ್ರತಿಯನ್ನು ನೀಡಲಾಯಿತು.
ಅಸಮಾನತೆ ತುಂಬಿದ ಭಾರತದಲ್ಲಿ ಸಮಾನತೆಯನ್ನು ತರುವ ಉದ್ದೇಶದಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರು ಸರ್ವಸಮಾನತೆಯ ಪ್ರತೀಕವಾದ ಸಂವಿಧಾನವನ್ನು 1949ನೇ ಇಸವಿಯ ನವಂಬರ್ ತಿಂಗಳ 26ನೇ ತಾರೀಖಿನಂದು ಭಾರತ ಸರ್ಕಾರಕ್ಕೆ ಸಮರ್ಪಿಸಿದರು. ನಂತರ ಭಾರತ ಸರ್ಕಾರವು 1950ನೇ ಇಸವಿಯ ಜನವರಿ 26ನೇ ದಿನದಂದ ಸಂವಿಧಾನವನ್ನು ಅಧಿಕೃತವಾಗಿ ಅಳವಡಿಸಿಕೊಂಡು ಆ ದಿನವನ್ನು ಗಣರಾಜ್ಯ ದಿನ ಎಂದು ಸಂಭ್ರಮಿಸುತ್ತ ಬರಲಾಗಿದೆ. ಇಂದಿಗೆ ಭಾರತ ಸಂವಿಧಾನ ಜಾರಿಯಾಗಿ 75 ವರ್ಷ ತುಂಬಿದೆ. ಸಂವಿಧಾನ ಜಾರಿಯಾಗಿ ಈ 75 ವರ್ಷಗಳಲ್ಲಿ ಭಾರತದಲ್ಲಿ ಗಣನೀಯವಾದ ಪ್ರಗತಿಯಾಗಿದೆ. ಆದರೆ ಭಾರತದ ಪ್ರಗತಿಗೆ ಕಾರಣವಾದ ಸಂವಿಧಾನದ ಬಗ್ಗೆ ಇನ್ನೂ ಜನಸಾಮಾನ್ಯರಿಗೆ ಮಾತ್ರವಲ್ಲ ವಿದ್ಯಾವಂತರಿಗೂ ಅರಿವಿನ ಕೊರತೆ ಇದೆ. ಹೀಗಾಗಿ ಸಂವಿಧಾನ ಜಾರಿಯಾಗಿ 75 ಪೂರ್ಣವಾಗಿರುವ ಈ ಹೊತ್ತಿನಲ್ಲಿ ಸರ್ಕಾರಗಳು ಸಂವಿಧಾನ ಜಾಗೃತಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸಿ ಜನಸಾಮಾನ್ಯ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ವಿಶೇಷ ಯೋಜನೆ ಕೈಗೊಂಡಿವೆ. ಈ ಹೊತ್ತಿನಲ್ಲಿ ನಾವು ಏಕಾಂತಗಿರಿ ಟ್ರಸ್ಟ್ ಅಡಿಯಲ್ಲಿ "ಸಂವಿಧಾನ ಜಾಗೃತಿ ಅಭಿಯಾನ-2024" ರ ಅಡಿಯಲ್ಲಿ ಶಾಲಾ ಮಕ್ಕಳು, ಜನಸಾಮಾನ್ಯರನ್ನು ಗುರಿಯಾಗಿಟ್ಟುಕೊಂಡು ಸಂವಿಧಾನದ ಕುರಿತಾಗಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸ್ಪರ್ಧೆ, ರಸಪ್ರಶ್ನೆ, ಸಂವಿಧಾನ ಪೀಠಿಕೆಯ ಕಂಠಪಾಠದಂತಹ ಕಾರ್ಯಯೋಜನೆ ಮೂಲಕ ಸಂವಿಧಾನದ ಅರಿವು ಮೂಡಿಸುವ ಪ್ರಯತ್ನಕ್ಕೆ ಮುಂದಾಗಿರುತ್ತೇವೆ. ಇದರ ಭಾಗವಾಗಿ ಸಂವಿಧಾನ ಪೀಠಿಕೆಯನ್ನು ಜನಸಾಮಾನ್ಯರು ಹಾಗೂ ವಿದ್ಯಾರ್ಥಿಗಳ ಕೈಗೆ ಸುಲಭವಾಗಿ ತಲುಪಿಸುವ ಹೊಣೆ ಹೊತ್ತು ಮುನ್ನಡೆಯುತ್ತಿದ್ದೇವೆ.
ದಿನಾಂಕ: 11-02-2024 ರಂದು ಸಂವಿಧಾನ ಜಾಗೃತಿ ಅಭಿಯಾನ-2024ರ ಅಂಗವಾಗಿ ಹರಪನಹಳ್ಳಿಯ ಸ್ವಾಮಿ ವಿವೇಕಾನಂದ ನವೋದಯ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ
ವಿಶ್ವ ಏಡ್ಸ್ ದಿನ-2023
29-11-2023 ರಂದು ಏಕಾಂತಗಿರಿ ಟ್ರಸ್ಟ್ ಹಾಗೂ ವಿ.ಬಿ.ಪಿ. ಫೌಂಡೇಶನ್ ಸಹಯೋಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ದಾವಣಗೆರೆ ಇಲ್ಲಿ ಎನ್.ಎಸ್.ಎಸ್ ಶಿಬಿರಾರ್ಥಿಗಳಿಂದ ದಾವಣಗೆರೆ ತಾಲ್ಲೂಕಿನ ಶ್ಯಾಗಲೆ ಗ್ರಾಮದಲ್ಲಿ ಎಚ್.ಐ.ವಿ/ ಏಡ್ಸ್ ಜಾಗೃತಿ ಜಾಥ
ಏಕಾಂತಗಿರಿ ಟ್ರಸ್ಟ್, ವಿ.ಬಿ.ಪಿ ಫೌಂಡೇಶನ್, ಪ್ರಜಾವಾಣಿ ಸಹಯೋಗದಲ್ಲಿ ದಿನಾಂಕ 01-12-2023 ರಂದು ದಾವಣಗೆರೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ "ವಿಶ್ವ ಏಡ್ ದಿನ" ಕಾರ್ಯಕ್ರಮ.
ಎಚ್.ಐ.ವಿ ಜಾಗೃತಿ ಜಾಥ
ದಿನಾಂಕ: 11 ಡಿಸೆಂಬರ್ 2023 ರಂದು ದಾವಣಗೆರೆ ತಾಲ್ಲೂಕಿನ ಕಂದಗಲ್ಲು ಗ್ರಾಮದಲ್ಲಿ ಎಂ.ಎಸ್.ಬಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಿದ್ಯಾರ್ಥಿಗಳಿಂದ ಎಚ್.ಐ.ವಿ ಜಾಗೃತಿ ಜಾಥ
29-11-2023 ರಂದು ಏಕಾಂತಗಿರಿ ಟ್ರಸ್ಟ್ ಹಾಗೂ ವಿ.ಬಿ.ಪಿ. ಫೌಂಡೇಶನ್ ಸಹಯೋಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ದಾವಣಗೆರೆ ಇಲ್ಲಿ ಎನ್.ಎಸ್.ಎಸ್ ಶಿಬಿರಾರ್ಥಿಗಳಿಂದ ದಾವಣಗೆರೆ ತಾಲ್ಲೂಕಿನ ಶ್ಯಾಗಲೆ ಗ್ರಾಮದಲ್ಲಿ ಎಚ್.ಐ.ವಿ/ ಏಡ್ಸ್ ಜಾಗೃತಿ ಜಾಥ
ವಿಶ್ವ ಏಡ್ಸ್ ದಿನ-2022
ಎ.ವಿ.ಕಮಲಮ್ಮ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ
"ವಿಶ್ವ ಏಡ್ಸ್ ದಿನ-೨೦೨೨" ಕಾರ್ಯಕ್ರಮ
ಎ.ವಿ.ಕಮಲಮ್ಮ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ "ವಿಶ್ವ ಏಡ್ಸ್ ದಿನ-೨೦೨೨" ಕಾರ್ಯಕ್ರಮದ ಪತ್ರಿಕಾ ವರದಿಗಳು
ಹೆಚ್.ಐ.ವಿ/ಏಡ್ಸ್ ಜಾಗೃತಿ ಅಭಿಯಾನ
ದಿನಾಂಕ: 07-11-2022 ರಂದು ಸರ್ಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜು, ದಾವಣಗೆರೆ ಇಲ್ಲಿ ವಿ.ಬಿ.ಪಿ ಫೌಂಡೇಶನ್ ಹಾಗೂ ಏಕಾಂತಗಿರಿ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹೆಚ್.ಐ.ವಿ/ಎಡ್ಸ್ ಜಾಗೃತಿ ಅಭಿಯಾನಕ್ಕೆ ಪ್ರಾಂಶುಪಾಲರಾದ ಡಾ.ಸಿ.ಕೆ.ಕೊಟ್ರಪ್ಪನವರು ಚಾಲನೆ ನೀಡಿದರು. ವಿ.ಬಿ.ಪಿ ಫೌಂಡೇಶನ್ ಸಂಸ್ಥಾಪಕರಾದ ಶಿವಕುಮಾರ್ ಮೇಗಳಮನೆ, ಏಕಾಂತಗಿರಿ ಟ್ರಸ್ಟ್ ಕಾರ್ಯದರ್ಶಿ ಡಾ.ಕೆ.ಎ.ಓಬಳೇಶ್ ಏಡ್ಸ್ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.
ದಿನಾಂಕ: 08-11-2022 ರಂದು ಮಂಗಳವಾರ "ದೇವನಗರಿ ಸುದ್ಧಿದಿನ" ಪತ್ರಿಕೆಯ ವರದಿ.
ದಿನಾಂಕ: 18-11-2022 ರಂದು ದಾವಣಗೆರೆ ನಗರದ ಎಸ್.ಎಲ್.ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಹೆಚ್.ಐ.ವಿ/ಏಡ್ಸ್ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು.
ದಿನಾಂಕ: 19-11-2022 ರಂದು ದಾವಣಗೆರೆ ನಗರದ ಸುಂದರಮ್ಮ ಲಕ್ಷ್ಮಣಶಟ್ಟಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಹೆಚ್.ಐ.ವಿ/ಏಡ್ಸ್ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು.
ಮಕ್ಕಳಿಗೆ ವ್ಯಕ್ತಿತ್ವ ವಿಕಸನ ಶಿಬಿರ
ದಿನಾಂಕ 30 ಮೇ 2022 ರಂದು ಸ್ವಾಮಿ ವಿವೇಕಾನಂದ ನವೋದಯ ತರಬೇತಿ ಕೇಂದ್ರ, ಹರಪನಹಳ್ಳಿ ಇಲ್ಲಿ ತರಬೇತಿ ಪಡೆಯುತ್ತಿರುವ ಮಕ್ಕಳಿಗೆ 'ಏಕಾಂತಗಿರಿ ಟ್ರಸ್ಟ್' ಅಡಿಯಲ್ಲಿ ಒಂದು ದಿನದ ವ್ಯಕ್ತಿತ್ವ ವಿಕಸನ ಶಿಬಿರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಏಕಾಂತಗಿರಿ ಟ್ರಸ್ಟ್ ಕಾರ್ಯದರ್ಶಿಯಾದ ಡಾ.ಕೆ.ಎ.ಓಬಳೇಶ್ ಅವರು ವಹಿಸಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಕೊಟ್ರೇಶ್, ಡಾ.ಟಿ.ಜಿ.ಮಲ್ಲಿಕಾರ್ಜುನ್ ಇವರು ಭಾಗವಹಿಸಿದ್ದರು. ಸ್ವಾಮಿ ವಿವೇಕಾನಂದ ನವೋದಯ ತರಬೇತಿ ಕೇಂದ್ರದ ಸಂಸ್ಥಾಪಕರಾದ ಪ್ರಭಾಕರ್ ಜಿ, ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
bottom of page