Eakantagiri Trust
ಈಶಾವಾಸ್ಯಂ
ಏಕಾಂತಗಿರಿ ಟ್ರಸ್ಟ್ ಅಡಿಯಲ್ಲಿ ಪ್ರಕಟವಾದ 'ಈಶಾವಾಸ್ಯಂ' ಕೃತಿಯು ಪ್ರೊ.ಎಚ್.ಲಿಂಗಪ್ಪನವರ ಬದುಕು-ಬರಹವನ್ನು ಪ್ರತಿನಿಧಿಸುವ ಕೃತಿಯಾಗಿದ್ದು, ಈ ಕೃತಿಯನ್ನು ಟಿ.ಎಸ್.ರಾಜೇಂದ್ರ ಪ್ರಸಾದ್ ಅವರು ರಚಿಸಿರುತ್ತಾರೆ.
ಬೋಧಿವೃಕ್ಷದ ನೆರಳು
ಡಾ.ಪ್ರವೀಣ್ ಕುಮಾರ್ ಎಚ್.ಎಲ್ ಅವರ ಸಂಪಾದಕತ್ವದ "ಬೋಧಿವೃಕ್ಷದ ನೆರಳು" ಎಂಬ ಕೃತಿಯಲ್ಲಿ ಸಾಹಿತಿಗಳು, ಚಿಂತಕರಾದ ಪ್ರೊ.ಎಚ್.ಲಿಂಗಪ್ಪ ಅವರ ವಿವಿಧ ಕೃತಿಗಳ ಮೇಲೆ ಮೂಡಿಬಂದ ವಿಮರ್ಶಾ ಲೇಖನಗಳನ್ನು ಸಂಗ್ರಹಿಸಲಾಗಿದೆ.
ಆಂಧ್ರಪ್ರದೇಶದಲ್ಲಿ ನೂರು ವರ್ಷಗಳ ಅಂತರದಲ್ಲಿ ನಡೆದಿರುವ ದಲಿತರ ಮೇಲಿನ ಶೋಷಣೆಗಳು, ಇದಕ್ಕೆ ಪೂರಕವಾಗಿ ಜನ್ಮತಳೆದ ದಲಿತಪರ ಹೋರಾಟಗಳನ್ನು ಎತ್ತಿಹಿಡಿಯುವ ನೆಲೆಯಲ್ಲಿ ಡಾ.ಅಡಪ ಸತ್ಯನಾರಾಯಣ ಅವರು 'ಆಂಧ್ರಪ್ರದೇಶದಲ್ಲಿ ನೂರು ವರ್ಷಗಳ ದಲಿತ ಚರಿತೆ' ಎಂಬ ರಚಿಸಿದ್ದಾರೆ. ತೆಲುಗು ಭಾಷೆಯಲ್ಲಿ ರೂಪಿತವಾದ ಈ ಕೃತಿಯನ್ನು 'ಡಾ.ಜಿ.ಪಿ.ನಾಗರಾಜ' ಇವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಏಕಾಂತಗಿರಿ ಟ್ರಸ್ಟ್ ಅಡಿಯಲ್ಲಿ ಪ್ರಕಟವಾಗಿದೆ.
ಆಂಧ್ರಪ್ರದೇಶದಲ್ಲಿ ನೂರು ವರ್ಷಗಳ ದಲಿತ ಚರಿತೆ
ಸದ್ಬಾವದ ಸೊಡರು
ಬಸವಾದಿ ಶರಣರ ತತ್ವ ಚಿಂತನೆಗಳನ್ನು ಮೈಗೂಡಿಸಿಕೊಂಡು ಸಾತ್ವಿಕ ಬದುಕನ್ನು ರೂಪಿಸಿಕೊಂಡವರು ಶರಣ ಎಚ್.ಎಂ.ಸ್ವಾಮಿಯವರು. ಇವರು ಇಂಜಿನಿಯರಿಂಗ್ ಆಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರವಾದ ಸಾಧನೆ ಮಾಡಿದವರು. ಕಾಯಕವೇ ಕೈಲಾಸ ಎಂಬ ಶರಣರ ತತ್ವಕ್ಕೆ ಬದ್ಧರಾಗಿ ನಡೆ-ನುಡಿ ಒಂದಾಗಿಸಿಕೊಂಡು ಬಾಳಿದವರು. ಇವರು ವಿವಿಧ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಡಾ.ಗೀತಾ ಬಸವರಾಜು ಅವರು "ಸದ್ಭಾವರ ಸೊಡರು" ಎಂಬ ಕೃತಿಯನ್ನು ರಚಿಸಿದ್ದಾರೆ. ಈ ಕೃತಿಯನ್ನು ೨೦೨೧ ರಲ್ಲಿ ಏಕಾಂತಗಿರಿ ಟ್ರಸ್ಟ್ ಅಡಿಯಲ್ಲಿ ಪ್ರಕಟಿಸಲಾಗಿದೆ.